Sunday, 11th May 2025

ಮದ್ಯ ಕುಡಿದು ಸತ್ತವರ ಕುಟುಂಬಕ್ಕೆ ಪರಿಹಾರ ಇಲ್ಲ: ನಿತೀಶ್ ಕುಮಾರ್

ಪಾಟ್ನಾ: ಮದ್ಯ ಕುಡಿದು ಸತ್ತವರ ಕುಟುಂಬಕ್ಕೆ ಯಾವುದೇ ಪರಿಹಾರ ಕೊಡುವುದಿಲ್ಲ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಬಿಹಾರದ ಸರನ್ ಜಿಲ್ಲೆಯಲ್ಲಿ ಕಳ್ಳ ಬಟ್ಟಿ ಸೇವಿಸಿ 53 ಮಂದಿ ಸಾವನ್ನಪ್ಪಿದ ಘಟನೆಯನ್ನ ಉಲ್ಲೇಖಿಸಿ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದರು.

ನಾವು ಮನವಿ ಮಾಡುತ್ತಲೇ ಇದ್ದೇವೆ, ಕುಡಿತವು ನಿಮಗೆ ಒಳ್ಳೆಯದನ್ನ ತಂದುಕೊಡಲ್ಲ ಎಂದು ಹೇಳುತ್ತಲೇ ಇದ್ದೇವೆ. ಆದರೂ ಕುಡಿದು ಸಾಯುತ್ತೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ `ಜೊ ಪಿಯೇಗಾ ವೋ ಮರೇಗಾ (ಯಾರು ಕುಡಿಯು ತ್ತಾರೋ ಅವರು ಸಾಯುತ್ತಾರೆ)’ ಎಂಬ ನಿತೀಶ್‌ಕುಮಾರ್ ಹೇಳಿಕೆಯನ್ನ ಖಂಡಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು, ರಾಜೀನಾಮೆಗೂ ಒತ್ತಾಯಿದರು.