Thursday, 15th May 2025

ಅಗ್ನಿ ದುರಂತ: ಗಾಢನಿದ್ರೆಯಲ್ಲಿದ್ದ ಆರು ಮಂದಿ ಸಜೀವ ದಹನ

ಹೈದರಾಬಾದ್: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ಮಧ್ಯರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಿದ್ರೆಯಲ್ಲಿದ್ದ ಕುಟುಂಬವೊಂದರ ಇಬ್ಬರು ಮಕ್ಕಳು ಸೇರಿ ಆರು ಮಂದಿ ಸದಸ್ಯರು ಸಜೀವ ದಹನವಾಗಿದ್ದಾರೆ.

ಗ್ರಾಮ ಕಂದಾಯ ಸಹಾಯಕ ಮಸುಶಿವಯ್ಯ (50) ಅವರ ಪತ್ನಿ ಪದ್ಮ (45), ಪದ್ಮ ಅವರ ಅಕ್ಕನ ಮಗಳು ಮೌನಿಕಾ (23) ಆಕೆಯ ಇಬ್ಬರು ಹೆಣ್ಣು ಮಕ್ಕಳಾದ ಹಿಮಬಿಂಧು, ಸ್ವೀಟಿ, ಸಂಬಂಧಿಕರಾದ ಶಾಂತಯ್ಯ ಸಜೀವಂತ ದಹನವಾಗಿದ್ದಾರೆ.

ಮನೆ ಬೆಂಕಿಯ ಕೆನ್ನಾಲಿಗೆಗಳಿಂದ ಉರಿಯುತ್ತಿರುವು ದನ್ನು ಅಕ್ಕಪಕ್ಕದವರು ಗಮನಿಸಿ ದ್ದಾರೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿ ಶಾಮಕ ದಳ ಸ್ಥಳಕ್ಕಾಗ ಮಿಸಿದೆ. ಆ ವೇಳೆಗಾಗಲೇ ಇಡೀ ಮನೆ ಸಂಪೂರ್ಣ ಭಸ್ಮವಾಗಿದೆ. ಆರು ಮಂದಿ ಸುಟ್ಟು ಕರಕಲಾಗಿರು ವುದು ಪತ್ತೆಯಾಗಿದೆ.

ಮನೆಯಲ್ಲಿ ಶಿವಯ್ಯ ಮತ್ತು ಪದ್ಮ ವಾಸವಿದ್ದರು. ಕಳೆದೆರಡು ದಿನಗಳ ಹಿಂದೆ ಮೌನಿಕಾ, ಆಕೆಯ ಮಕ್ಕಳು ಮತ್ತು ಸಂಬಂಧಿ ಕರು ಆಗಮಿಸಿದ್ದರು. ಬೆಂಕಿ ಹತ್ತಿದಾಗ ಎಲ್ಲರೂ ಮನೆಯಲ್ಲಿದ್ದು ಮೃತಪಟ್ಟಿದ್ದಾರೆ ಎಂದು ಮಂಚೇರಿಯಲ್ ವಿಭಾಗದ ಎಸಿಪಿ ತಿಳಿಸಿದ್ದಾರೆ.

ಬೆಂಕಿಗೆ ಕಾರಣವಾಗಿರುವ ಅಂಶಗಳು ಅನುಮಾನಸ್ಪದವಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ಅಖಿಲ್ ಮಹಾಜನ್ ತಿಳಿಸಿದ್ದಾರೆ. ಬಹುತೇಕ ಮರದ ವಸ್ತುಗಳನ್ನು ಬಳಸಿ ನಿರ್ಮಿಸಿದ್ದರಿಂದ ಮನೆ ಬೆಂಕಿಯಿಂದ ಬೂದಿಯಾಗಿ ಹೋಗಿದೆ.