Wednesday, 14th May 2025

ಮೂರು ವರ್ಷದ ಪದವಿ ಕೋರ್ಸ್‌ ಶೀಘ್ರ ಸ್ಥಗಿತವಿಲ್ಲ

ವದೆಹಲಿ: ನಾಲ್ಕು ವರ್ಷಗಳ ಪದವಿ ಕೋರ್ಸ್‌ಗಳನ್ನು ಸಂಪೂರ್ಣವಾಗಿ ಜಾರಿ ಗೊಳಿಸುವವರೆಗೆ ಮೂರು ವರ್ಷದ ಪದವಿ ಕೋರ್ಸ್‌ಗಳನ್ನು ಸ್ಥಗಿತಗೊಳಿಸುವುದಿಲ್ಲ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಎಂ.ಜಗದೀಶ್‌ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ವಿಶ್ವವಿದ್ಯಾಲಯಗಳಿಗೆ ಮೂರು ಅಥವಾ ನಾಲ್ಕು ವರ್ಷದ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರುತ್ತದೆ. ನಾಲ್ಕು ವರ್ಷದ ಕೋರ್ಸ್‌ಗೆ ಸಂಬಂಧಿಸಿದಂತೆ ಹೊಸ ಪಠ್ಯಕ್ರಮದ ಚೌಕಟ್ಟನ್ನು ಘೋಷಿಸಲಾಗಿದೆ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ.

ನಾಲ್ಕು ವರ್ಷಗಳ ಪದವಿಗಳನ್ನು ಹೊಂದಿರುವ ಅಭ್ಯರ್ಥಿಗಳು ನೇರವಾಗಿ ಪಿಎಚ್‌ಡಿ ಅನ್ನು ಮುಂದುವರಿಸಬಹುದು ಮತ್ತು ಅವರಿಗೆ ಸ್ನಾತಕೋತ್ತರ ಪದವಿಯ ಅಗತ್ಯ ವಿರುವುದಿಲ್ಲ ಎಂದು ಹೇಳಿದ್ದಾರೆ.