Wednesday, 14th May 2025

ಸ್ಟಾಲಿನ್ ಸಂಪುಟ ಸಚಿವರಾಗಿ ಉದಯನಿಧಿ ಪ್ರಮಾಣವಚನ ಸ್ವೀಕಾರ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ದರು.

ತಮಿಳು ಕಾರ್ತಿಕ ಮಾಸದ ಶುಭ ಮುಹೂರ್ತದಲ್ಲಿ ಅವರು ಪ್ರಮಾಣವಚನ ಸ್ವಿಕರಿಸಿ ದರು. ರಾಜ್ಯಪಾಲ ಆರ್‌.ಎನ್. ರವಿ, ಉದಯನಿಧಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಚೆನ್ನೈನ ಚೆಪಾಕ್-ತಿರುವಲ್ಲಿಕೇನಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆ ಯಾಗಿರುವ ಉದಯ್ ಅವರಿಗೆ, ಯುವಜನ, ಕ್ರೀಡಾಭಿವೃದ್ಧಿ ಮತ್ತು ವಿಶೇಷ ಕಾರ್ಯ ಕ್ರಮಗಳ ಜಾರಿ ಇಲಾಖೆ ಖಾತೆ ಸಿಗುವ ಸಾಧ್ಯತೆ ಇದೆ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಮೈತ್ರಿ ಪಕ್ಷಗಳ ಮುಖಂಡರು ಭಾಗವಹಿಸಿ ದ್ದರು.

ಶಾಸಕರಾಗಿ ಒಂದೂವರೆ ವರ್ಷಕ್ಕೆ ಮಗನಿಗೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಿರುವ ಸ್ಟಾಲಿನ್, ತಮ್ಮ ಉತ್ತರಾಧಿಕಾರಿ ಯಾಗಿ ಬೆಳೆಸುವ ಸೂಚನೆ ಕೊಟ್ಟಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಕರುಣಾನಿಧಿ ನಿಧನದ ಬಳಿಕ ಡಿಎಂಕೆ ಪಕ್ಷದಲ್ಲಿ ಸ್ಟಾಲಿನ್ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ.