Thursday, 15th May 2025

ಎಂಸಿಡಿ ಚುನಾವಣೆ ಸೋಲು: ದೆಹಲಿ ಬಿಜೆಪಿ ಮುಖ್ಯಸ್ಥ ರಾಜೀನಾಮೆ

ನವದೆಹಲಿ: ಎಂಸಿಡಿ ಚುನಾವಣೆಯಲ್ಲಿ ಪಕ್ಷದ ಸೋಲಿನ ಹೊಣೆ ಹೊತ್ತು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಭಾನುವಾರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಅವರ ರಾಜೀನಾಮೆ ಅಂಗೀಕರಿಸಲಾಗಿದ್ದು, ದೆಹಲಿ ಘಟಕದ ಉಪಾಧ್ಯಕ್ಷ ವೀರೇಂದ್ರ ಸಚ್‌ದೇವ ಅವರನ್ನು ಹಂಗಾಮಿ ಅಧ್ಯಕ್ಷ ರನ್ನಾಗಿ ಮಾಡಲಾಗಿದೆ.

“ಎಂಸಿಡಿಯಲ್ಲಿನ ಸೋಲಿನ ಜವಾಬ್ದಾರಿಯನ್ನು ಹೊತ್ತುಕೊಂಡು ನನ್ನ ರಾಜೀನಾಮೆ ಯನ್ನು ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಿ ದ್ದೇನೆ. ಅದನ್ನು ಅಂಗೀಕರಿಸಲಾಗಿದೆ” ಎಂದು ಗುಪ್ತಾ ತಿಳಿಸಿದ್ದಾರೆ.

ಬುಧವಾರ ಪ್ರಕಟವಾದ ಕಾರ್ಪೋರೇಷನ್ ಚುನಾವಣೆಯಲ್ಲಿ ಸೋತ ನಂತರ ದೆಹಲಿ ಬಿಜೆಪಿಯ ನಾಯಕತ್ವದಲ್ಲಿ ಬದಲಾ ವಣೆಯ ಕೂಗು ಕೇಳಿಬಂದಿತ್ತು.

ಎಂಸಿಡಿ ಚುನಾವಣೆ ಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 134 ಸ್ಥಾನಗಳೊಂದಿಗೆ ಜಯ ಗಳಿಸಿದ್ದು, ಬಿಜೆಪಿಯ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು ಮತ್ತು ಬಿಜೆಪಿಯನ್ನು 104 ಸ್ಥಾನಗಳಿಗೆ ಸೀಮಿತಗೊಳಿಸಿತ್ತು.