Sunday, 11th May 2025

ಮೊರ್ಬಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್‌’ಗೆ ಮುನ್ನಡೆ

ಹ್ಮದಾಬಾದ್: ಪ್ರಾಣ ಬಲಿ ಪಡೆದ ತೂಗು ಸೇತುವೆ ಕುಸಿತ ಘಟನೆ ನಡೆದ ಗುಜರಾತ್ ರಾಜ್ಯದ ಮೊರ್ಬಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯ ಆರಂಭಿಕ ಹಂತದಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಿಲಾಲ್ ಅಮೃತಿಯಾ ಮುನ್ನಡೆ ಸಾಧಿಸಿದ್ದಾರೆ.

ಈ ಕ್ಷೇತ್ರದ ಹಾಲಿ ಸದಸ್ಯ, ಬಿಜೆಪಿ ನಾಯಕ ಬೃಜೇಶ್ ಮಿಶ್ರಾ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಮಾಜಿ ಶಾಸಕರಾಗಿದ್ದ ಅಮೃತಿಯಾ ಅವರನ್ನು ಕಣಕ್ಕಿಳಿಸಿತ್ತು. ಮೊರ್ಬಿ ಸೇತುವೆ ದುರಂತ ನಡೆದ ಸಂದರ್ಭ ಸಹಾಯಹಸ್ತ ಚಾಚಿ ಹಲವರನ್ನು ಉಳಿಸಿದ್ದಕ್ಕಾಗಿ ಅಮೃತಿಯಾ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು ಎಂದು ಹೇಳಲಾಗುತ್ತಿದೆ.

ಮೊದಲ ಹಂತದ ಚುನಾವಣೆಯಲ್ಲಿ ಮತದಾನ ನಡೆದಿದ್ದ ಮೊರ್ಬಿಯಲ್ಲಿ ಶೇ 62 ರಷ್ಟು ಮತದಾನ ದಾಖಲಾಗಿತ್ತು.