Wednesday, 14th May 2025

ಬಿಜೆಪಿಯಲ್ಲಿ ನಾವು ದೇಶವನ್ನು ಪೂಜಿಸುತ್ತೇವೆ: ಹಿಮಂತ್ ಬಿಸ್ವಾ ಶರ್ಮಾ

ಗುವಾಹಟಿ: ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡಿರುವುದು ಯಾವುದೇ ಸೈದ್ಧಾಂತಿಕ ಬದಲಾವಣೆಯ ಉದ್ದೇಶವಾಗಿರಲಿಲ್ಲ. ಆದರೆ ನನ್ನ ಜೀವನದ 22 ವರ್ಷಗಳ ಕಾಲ ಕಾಂಗ್ರೆಸ್ ನಲ್ಲಿದ್ದಿದ್ದು ವ್ಯರ್ಥ ಎನಿಸಿದೆ ಎಂಬುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಾವು ಒಂದು ಕುಟುಂಬವನ್ನು ಪೂಜಿಸಲು ಬಳಕೆಯಾಗುತ್ತೇವೆ, ಬಿಜೆಪಿಯಲ್ಲಿ ನಾವು ದೇಶವನ್ನು ಪೂಜಿಸುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶರ್ಮಾ 2015ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಸಚಿವರಾಗಿ ಕಾರ್ಯನಿರ್ವಹಿಸಿದ್ದ ಹಿಮಂತ್ ಬಿಸ್ವಾ ಇಂದು ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ.