Monday, 12th May 2025

ಹಿಂದೂ ಹುಡುಗರನ್ನು ಮದುವೆಯಾಗಲು ಮುಸ್ಲಿಂ ಹುಡುಗಿಯರ ಮತಾಂತರ

ರೇಲಿ: ಉತ್ತರ ಪ್ರದೇಶದ ಬರೇಲಿಯ ಇಬ್ಬರು ಮುಸ್ಲಿಂ ಹುಡುಗಿಯರು ತಾವು ಪ್ರೀತಿಸಿದ ಹಿಂದೂ ಹುಡುಗರನ್ನು ಮದುವೆ ಯಾಗಲು ಹಿಂದೂ ಧರ್ಮಕ್ಕೆ ಮತಾಂತರ ಗೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಇರಾಮ್ ಜೈದಿ ಸ್ವಾತಿ ಮತ್ತು ಶಹನಾಜ್ ಸುಮನ್ ಆದಳು.

ಮದಿನಾಥ ದಲ್ಲಿರುವ ಅಗಸ್ಟ್ ಮುನಿ ಆಶ್ರಮದಲ್ಲಿ ಪಂಡಿತ್ ಕೆ ಕೆ ಶಂಖಧರ್ ಅವರು ಹಿಂದೂ ಸಂಪ್ರದಾಯದಂತೆ ವಿವಾಹ ನೆರವೇರಿಸಿದರು. ಸ್ವಾತಿ ಆದೇಶ್ ಕುಮಾರ್ ಅವರನ್ನು ವಿವಾಹವಾದರು ಮತ್ತು ಸುಮನ್ ಅಜಯ್ ಎಂಬುವರನ್ನು ವಿವಾಹ ವಾದರು.

ಈ ಇಬ್ಬರೂ ಹುಡುಗಿಯರು ತಮಗೆ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಇದೆ ಎಂದು ಹೇಳಿದರು. ‘ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಸಿಗುವುದಿಲ್ಲ. ಮುಸ್ಲಿಂ ಪುರುಷರು ಬಯಸಿದಾಗ, ಅವರು ಮೂರು ಬಾರಿ ತಲಾಖ್ ಅನ್ನು ಉಚ್ಚರಿಸಿ ವಿಚ್ಛೇದನ ನೀಡಿ ಹಲಾಲ ಸಂಸ್ಕಾರಕ್ಕೊಳಗೊಂಡು ಪುನಃ ತಾವು ವಿಚ್ಛೇದನ ನೀಡಿದ ಹೆಂಡತಿಯನ್ನು ಸೇರಿಸಿಕೊಳ್ಳುತ್ತಾರೆ’ ಎಂದು ಯುವತಿಯರು ಹೇಳಿದ್ದಾರೆ.

ಇಬ್ಬರು ಹುಡುಗಿಯರನ್ನು ಮೊದಲು ಪುರೋಹಿತರು ಶುದ್ಧೀಕರಿಸಿ ಹೆಸರುಗಳನ್ನು ಬದಲಾಯಿಸಿದ ನಂತರವೇ ಮದುವೆ ಶಾಸ್ತ್ರ ಪೂರೈಸಿದರು. ಮದುವೆ ಸಮಾರಂಭ ಪೂರ್ಣಗೊಂಡ ನಂತರ ವಧುಗಳು ಅರ್ಚಕರಿಂದ ಆಶೀರ್ವಾದ ಪಡೆದರು.