Thursday, 15th May 2025

ಮೊಬೈಲ್ ‘ಭಾರತ್ ಜೋಡೋ ಲೈಬ್ರರಿ’ ಸ್ಥಾಪನೆ

ರಾಜಕೀಯ, ಇತಿಹಾಸ ಮತ್ತು ನಾಯಕರ ಜೀವನವನ್ನೊಳಗೊಂಡ ವಿಷಯಗಳ ಕುರಿತು ಪುಸ್ತಕಗಳ ಮೊಬೈಲ್ ‘ಭಾರತ್ ಜೋಡೋ ಲೈಬ್ರರಿ’
ಉಜ್ಜಯಿನಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ಟ್ರಕ್ನಲ್ಲಿ ರಾಜಕೀಯ, ಇತಿಹಾಸ ಮತ್ತು ನಾಯಕರ ಜೀವನವ ನ್ನೊಳಗೊಂಡ ವಿಷಯಗಳ ಕುರಿತು ಪುಸ್ತಕಗಳನ್ನು ಒಳಗೊಂಡಿರುವ ಮೊಬೈಲ್ ‘ಭಾರತ್ ಜೋಡೋ ಲೈಬ್ರರಿ’ಯನ್ನು ಸ್ಥಾಪಿಸಲಾಗಿದೆ.
ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಓದಲು ಬಯಸುವವರಿಗೆ ಅವಕಾಶ ನೀಡಲು ಸುಮಾರು 1,000 ಪುಸ್ತಕಗಳ ಸಂಗ್ರಹವನ್ನು ಹೊಂದಿ ರುವ ಸೌಲಭ್ಯ ಸ್ಥಾಪಿಸಲಾಗಿದೆ ಎಂದು ಅಖಿಲ ಭಾರತ ಮಹಿಳಾ ಕಾಂಗ್ರೆಸ್ನ ರಾಷ್ಟ್ರೀಯ ಕಾನೂನು ನೆರವು ಸಂಯೋಜಕಿ ಅವನಿ ಬನ್ಸಾಲ್ ಉಜ್ಜಯಿನಿಯಲ್ಲಿ ತಿಳಿಸಿದರು.
ಗ್ರಂಥಾಲಯವು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದರೂ, ಗುರುವಾರ ಮಧ್ಯ ಪ್ರದೇಶದ ಯಾತ್ರೆಯ ಸಮಯದಲ್ಲಿ ರಾಹುಲ್ ಗಾಂಧಿಯವರು ಇದನ್ನು ಔಪಚಾರಿಕವಾಗಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು. ಯಾತ್ರೆಯ ನಂತರ ಕಾಂಗ್ರೆಸ್ ದೇಶದಾದ್ಯಂತ 500 ಭಾರತ್ ಜೋಡೋ ಗ್ರಂಥಾಲಯಗಳನ್ನು ಸ್ಥಾಪಿಸಲಿದೆ.