Thursday, 15th May 2025

ಸ್ಯಾಟಲೈಟ್‌ ಫೋನ್‌ ಸಾಗಾಟ: ರಷ್ಯಾದ ಮಾಜಿ ಸಚಿವರ ಬಂಧನ

ವದೆಹಲಿ: ದಾಖಲೆಗಳಿಲ್ಲದೆ ಸ್ಯಾಟಲೈಟ್‌ ಫೋನ್‌ ಸಾಗಿಸುತ್ತಿದ್ದ ರಷ್ಯಾದ ಮಾಜಿ ಸಚಿವರನ್ನು ಡೆಹ್ರಾಡೂನ್‌ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನಗಳಲ್ಲಿ ಪೂರ್ವಾನುಮತಿ ಇಲ್ಲದೆ ಸ್ಯಾಟಲೈಟ್ ಫೋನ್‌ಗಳನ್ನು ಅನುಮತಿಸ ಲಾಗುವುದಿಲ್ಲ. ವಿಕ್ಟರ್ ಸೆಮೆನೋವ್ (64) ರಷ್ಯಾದ ಕೃಷಿ ಮತ್ತು ಆಹಾರ ಸಚಿವರಾಗಿದ್ದರು. ಅವರನ್ನು ಭದ್ರತಾ ತಪಾಸಣೆಯ ಸಮಯದಲ್ಲಿ ವಿಮಾನ ನಿಲ್ದಾಣಗಳ ಕಾವಲುಗಾರರಾದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐ ಎಸ್‌ಎಫ್) ಸಿಬ್ಬಂದಿ ತಡೆದರು.

ಮಾಸ್ಕೋದಲ್ಲಿ ನೆಲೆಸಿರುವ ಸೆಮೆನೋವ್ ಅವರು ಇಂಡಿಗೋ ವಿಮಾನದಲ್ಲಿ ದೆಹಲಿಗೆ ತೆರಳಬೇಕಿತ್ತು.

ಸ್ಯಾಟಲೈಟ್ ಫೋನ್‌ ಅನ್ನು ಹೊಂದಿದ್ದಕ್ಕಾಗಿ ವಿಕ್ಟರ್ ಯಾವುದೇ ದಾಖಲೆಗಳನ್ನು ನೀಡಲು ಸಾಧ್ಯವಾಗಲಿಲ್ಲ. ತುರ್ತು ಸಂದರ್ಭದಲ್ಲಿ ವೈಯಕ್ತಿಕ ಬಳಕೆಗಾಗಿ ಸ್ಯಾಟಲೈಟ್ ಫೋನ್ ಕೊಂಡೊಯ್ಯುತ್ತಿದ್ದರು ಎಂದು ರಷ್ಯಾದ ಮಾಜಿ ಸಚಿವರು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.