Monday, 12th May 2025

ಬಿಎಸ್‌ಪಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ: ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ಕರೆ

ಚಿಕ್ಕಬಳ್ಳಾಪುರ : ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ತಾಲ್ಲೂಕು ಹಾಗೂ ಗ್ರಾಮ  ಮತಗಟ್ಟೆ ಮಟ್ಟದಲ್ಲಿ ಪಕ್ಷವನ್ನು  ಸಂಘಟನೆ ಮಾಡಬೇಕು ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್ ತಿಳಿಸಿದರು.

ನಗರದ ಡಾ. ಬಿ. ಆರ್ ಅಂಬೇಡ್ಕರ್ ಭವನದಲ್ಲಿ  ನಡೆದ ಬಹುಜನ ಸಮಾಜ ಪಕ್ಷದ ಜಿಲ್ಲಾ ಪುನರ್ ರಚನೆ ಸಭೆಯಲ್ಲಿ  ಅವರು ಮಾತನಾಡಿ ದರು.

ದೇಶದ ಜಾತೀಯತೆ, ಕೋಮುದ್ವೇಷ ಹರಡುವ ಮೂಲಕ ಅಭಿವ್ಯಕ್ತಿ, ಧಾರ್ಮಿಕ ಸ್ವಾತಂತ್ರ‍್ಯ ಹತ್ತಿಕ್ಕಲಾಗುತ್ತಿದೆ. ಸಂವಿಧಾನ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಕಲ್ಪಿಸಿದೆ. ಭಾರತಕ್ಕೆ ಸ್ವಾತಂತ್ರ‍್ಯ ದೊರೆತು ೭೫ ವರ್ಷ ಕಳೆದಿದೆ. ಆದರೆ ಸಮಾಜ ದಲ್ಲಿ ಅಸಮಾನತೆ, ಶೋಷಣೆ, ಅಸ್ಪೃಶ್ಯತೆ ಜೀವಂತವಾಗಿದೆ. ಪಟ್ಟಭದ್ರಾಹಿತಾಸಕ್ತಿ ರಾಜಕೀಯ ಪಕ್ಷಗಳ ಆಡಳಿತ ದಿಂದ ದೇಶದ ಸಂವಿಧಾನ ಆಶಯಗಳು ಪೂರ್ಣವಾಗಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.

ಬಹುಜನ ಸಮಾಜ ಪಕ್ಷದ ರಾಜ್ಯ  ಕಾರ್ಯದರ್ಶಿ ಪಿ.ವಿ.ನಾಗಪ್ಪ ಮಾತ ನಾಡಿ. ರಾಜ್ಯ ಸರ್ಕಾರವು ಜಾತಿ, ಧರ್ಮದ ರಾಜಕಾರಣದಲ್ಲಿ ಮುಳುಗಿ ಜನಸ್ಪಂದನ ಯಾತ್ರೆ ಮಾಡುತ್ತಿದೆ. ಆದರೆ, ನಮ್ಮ ಪಕ್ಷ ದೇಶದ ಸಂವಿಧಾನದ ರಕ್ಷಣೆಗಾಗಿ ಜನಜಾಗೃತಿ ಜಾಥಾವನ್ನು ಹಮ್ಮಿ ಕೊಂಡಿದೆ’ ಭಾರತ ಸಂವಿಧಾನ ಉಳಿಯಬೇಕು ಎಂಬ ಉದ್ದೇಶದಿಂದ ಕಳೆದ ಒಂದು ತಿಂಗಳಿನಿ0ದ  ರಾಜ್ಯಾದ್ಯಂತ ಜನ ಜಾಗೃತಿ ಜಾಥಾ ಕೈಗೊಳ್ಳಲಾಗಿದೆ. ಶೋಷಿತರಿಗೆ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಅಭಿಯಾನ ನಡೆಸಲಾಗುತ್ತಿದೆ’ ಎಂದರು.

ಬಹುಜನ ಸಮಾಜ ಪಕ್ಷದ ರಾಜ್ಯ ಉಪಾಧ್ಯಕ್ಷ ಕೆ.ಬಿ.ವಾಸು ಮಾತನಾಡಿ, ಅಸ್ಪೃಷ್ಯತೆ ನಿಷೇದ ಆಗಿ ೭೩ ವರ್ಷ ಆಗಿದೆ. ಆದರೆ ಇಂದಿಗೂ ಸಮಾಜದಲ್ಲಿ ಅಸ್ಪೃಷ್ಯತೆ ಜೀವಂತ ಇದೆ. ಇದು ಕಾನೂನು ಉಲ್ಲಂಘನೆ  ಆಗುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಪ್ರಸ್ತುತ ಸಮಾಜದಲ್ಲಿ ದಲಿತರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ. ದಲಿತರು ಹಾಗೂ ಮುಸ್ಲಿಮರು ಒಂದಾದರೆ ಅಧಿಕಾರ  ಪಡೆಯಬಹುದು. ಕೆಲವೇ ವ್ಯಕ್ತಿಗಳ ಹಿಡಿತದಲ್ಲಿ ದೇಶದ ಆಡಳಿತವಿದೆ  ಅದು   ಬದಲಾಗಬೇಕು. ಸಂವಿಧಾನದ ರಕ್ಷಣೆಗಾಗಿ ಸರ್ವರೂ ಬಿಎಸ್ಪಿ ಪಕ್ಷವನ್ನು ಬೆಂಬಲಿಸಬೇಕು’ ಎಂದರು.

ಸ0ವಿಧಾನ  ಪೂರ್ಣ ಪ್ರಮಾಣದಲ್ಲಿ ಜಾರಿಯಾಗದೆ ಶೇ ೧೫ರಷ್ಟು ಮಂದಿ ಹಿತರಕ್ಷಣೆಗೆ ಬೇಕಾಗಿರುವಷ್ಟು ಮಾತ್ರ ಜಾರಿ ಯಾಗಿದೆ. “ಶೇ ೮೫ರಷ್ಟಿರುವ ಬಹುಜನರನ್ನು ಶೇ ೧೫ರಷ್ಟು ಇರುವವರು ಶೋಷಣೆ ಮಾಡುತ್ತಿದ್ದರು. ಬಹುಜನರು ಮೊದಲು ಅಂಬೇಡ್ಕರ್ ಅವರನ್ನು  ಅರ್ಥ ಮಾಡಿಕೊಳ್ಳಬೇಕು. ನ್ಯಾಯ ನೀಡುವ ಜಾಗದಲ್ಲಿ ಶೋಷಣೆ ಮಾಡುವವರೇ ಕುಳಿತಿದ್ದಾರೆ. ಆದ್ದರಿಂದ ಬಹುಜನರು ಆಳುವ ವರ್ಗಗಳಾಗಿ ರೂಪುಗೊಳ್ಳಬೇಕು.

ಅಂಬೇಡ್ಕರ್ ಅವರು ಬಯಸುತ್ತಿರುವ ಬದ್ಧತೆಯನ್ನು ಬೆಳೆಸಿಕೊಳ್ಳಬೇಕು’ ನ.೨೭ರಂದು ಬೆಂಗಳೂರಿನಲ್ಲಿ ನಡೆಯುವ ಯುವ ಸಮಾವೇಶಕ್ಕೆ ಉತ್ತರ ಪ್ರದೇಶದ ರಾಷ್ಟೀಯ ಸಂಯೋಜಕ ಆಕಾಶ್ ಆನಂದ್  ಆಗಮಿಸಲಿದ್ದು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆ ಯಲ್ಲಿ ಯುವಕರು  ಭಾಗವಹಿಸಬೇಕು  ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ  ಪ್ರಧಾನ ಕಾರ್ಯದರ್ಶಿ ಎಂ.ಮುನಿಯಪ್ಪ, ರಾಜ್ಯ ಖಜಾಂಜಿ ಅಸಿನ್ ಇಕ್ಬಾಲ್, ಜಿಲ್ಲಾ ಸಂಯೋ ಜಕ ದೇವಪ್ಪ, ಮುಖಂಡರಾದ ಗುರಯ್ಯ, ನರೇಶ್, ಮೂರ್ತಿ, ಸೋಮಶೇಖರ್, ಸುರೇಶ್, ನಾರಾಯಣಸ್ವಾಮಿ ಸೇರಿದಂತೆ ಜಿಲ್ಲಾ ತಾಲ್ಲೂಕು ಮಟ್ಟದ ಮುಖಂಡರು ಹಾಜರಿದ್ದರು.