Thursday, 15th May 2025

ಅಭಿಜಿತ್ ಬೋಸ್, ರಾಜೀವ್ ಅಗರ್ವಾಲ್ ರಾಜೀನಾಮೆ

ನವದೆಹಲಿ: ವಾಟ್ಸಾಪ್‌ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಮೆಟಾ ಇಂಡಿಯಾ ನಿರ್ದೇಶಕ ರಾಜೀವ್ ಅಗರ್ವಾಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ವಾಟ್ಸಾಪ್‌ ಇಂಡಿಯಾ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್ ರನ್ನು ಈಗ ಭಾರತದ ಎಲ್ಲಾ ಮೆಟಾ ಬ್ರಾಂಡ್‌ ಗಳಿಗೆ ಸಾರ್ವಜನಿಕ ನೀತಿಯ ನಿರ್ದೇಶಕರಾಗಿ ನೇಮಿಸ ಲಾಗಿದೆ.

ಭಾರತದಲ್ಲಿ ನಮ್ಮ ಮೊದಲ ವಾಟ್ಸಾಪ್‌ ಮುಖ್ಯಸ್ಥರಾಗಿ ಅಭಿಜಿತ್ ಬೋಸ್ ಅವರ ಅಪಾರ ಕೊಡುಗೆಗಳಿಗಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತದ ವಾಟ್ಸಾಪ್‌ ಗಾಗಿ ಇನ್ನೂ ಹೆಚ್ಚಿನದನ್ನು ಮಾಡಲು ಮತ್ತು ಭಾರತದ ಡಿಜಿಟಲ್ ರೂಪಾಂತರವನ್ನು ಮುಂದುವರಿಸಲು ಸಹಾಯ ಮಾಡಲು ನಾವು ಉತ್ಸುಕರಾಗಿದ್ದೇವೆ” ಎಂದು ವಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥ್‌ಕಾರ್ಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇನ್ನೂ ಮತ್ತೊಂದು ಉನ್ನತ ಅವಕಾಶ ಲಭಿಸಿರುವ ಕಾರಣ ರಾಜೀವ್ ಅಗರ್ವಾಲ್ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಕಂಪನಿ ಹೇಳಿದೆ.

ಫೇಸ್‌ಬುಕ್ ಪೋಷಕ ಸಂಸ್ಥೆಯಾಗಿರುವ ಮೆಟಾ ಕಂಪನಿಯು 11,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಈ ನಿರ್ಧಾರದ ಕುರಿತು ಮೇಟಾದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್, ತಮ್ಮ ಉದ್ಯೋಗಿಗಳಿಗೆ ಕ್ಷಮೆಯಾಚಿಸುವ ಪತ್ರ ನೀಡಿದ್ದರು.