Tuesday, 13th May 2025

ರಾಜ್ಯಪಾಲರ ವಿರುದ್ದ ಸುಗ್ರೀವಾಜ್ಞೆ ಅಸ್ತ್ರ: ಕೇರಳ ಸಚಿವ ಸಂಪುಟ

ಕೊಚ್ಚಿ: ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕಲು ಸುಗ್ರೀವಾಜ್ಞೆ ತರಲು ಕೇರಳ ಸಚಿವ ಸಂಪುಟ ನಿರ್ಧರಿಸಿದೆ. ಕುಲಪತಿಗಳ ಬದಲಿಗೆ ತಜ್ಞರನ್ನು ನೇಮಕ ಮಾಡಲು ಇಂದು ನಡೆದ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಅಂತ ತಿಳಿದು ಬಂದಿದೆ.

ಕಾನೂನು ಇಲಾಖೆ ಸಿದ್ಧಪಡಿಸಿದ ಕರಡು ಸುಗ್ರೀವಾಜ್ಞೆಯನ್ನು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತೆಗೆದು ಕೊಳ್ಳಲಾಯಿತು.

ವಿಶ್ವವಿದ್ಯಾಲಯಗಳ ಕುಲಪತಿಯಾಗಿ ಖಾನ್ ಅವರು ರಾಜ್ಯದ 11 ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಶೋಕಾಸ್ ನೋಟಿಸ್ ನೀಡಿದ್ದರು, ಇದರ ವಿರುದ್ಧ ವಿಸಿಗಳು ನೋಟಿಸ್ ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.