Monday, 26th May 2025

ಒಂದೇ ನಿವೇಶನ ಇಬ್ಬರಿಗೆ ಮಾರಾಟ: ಪಾವಗಡ ಪುರಸಭೆ ಸದಸ್ಯನ ಬಂಧನ

ಪಾವಗಡ: ಒಂದೇ ನಿವೇಶನವನ್ನು ಇಬ್ಬರಿಗೆ ಮಾರಾಟ ಮಾಡಿದ ಪ್ರಕರಣದಲ್ಲಿ ಪಟ್ಟಣದ ಪುರಸಭೆಯ ಸದಸ್ಯ ಬಾಲಸುಬ್ರಮಣ್ಯಂ ರನ್ನು ಪೊಲೀಸರು ಬಂಧಿಸಿದ್ದಾರೆ.

ಪಟ್ಟಣದ 7 ನೇ ವಾರ್ಡ್ ಪುರಸಭೆ ಸದಸ್ಯ ಬಾಲಸುಬ್ರಹ್ಮಣ್ಯಂ ಬಂಧಿತ ಆರೋಪಿ. ಆರೋಪಿ ಬಾಲಸುಬ್ರಮಣ್ಯಂ ರೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರುವ ಐವಾರ್ಲ ಹಳ್ಳಿ ರಸ್ತೆಯಲ್ಲಿರುವ ಮಲ್ಲೇಶ್ವರ ಬಡಾವಣೆಯಲ್ಲಿನ ನಾಲ್ಕನೇ ನಂಬರ್ ನಿವೇಶನ ವನ್ನು ಅಕ್ಟೋಬರ್-26, 2021 ರಂದು ವಳ್ಳೂರಿನ ವೈ ಎಮ್ ಸಂತೋಷ ರೆಡ್ಡಿ ಯವರಿಗೆ ಶುದ್ಧ ಕ್ರಯಕ್ಕೆ ಸಬ್ ರಿಜಿಸ್ಟರ್ ಕಚೇರಿ ಯಲ್ಲಿ ರಿಜಿಸ್ಟ್ರೇಷನ್ ಮಾಡಿಕೊಡಲಾಗಿತ್ತು.

ನೋಂದಣಿ ನಂತರ ಖಾತೆ ಮಾಡಿಸಿಕೊಳ್ಳವ ವೇಳೆಗೆ ಅದೇ ನಿವೇಶನವನ್ನು ಕೆಂಚಗಾನ ಹಳ್ಳಿಯ ಅನುಷಾ ಎಂಬುವರಿಗೂ ನೋಂದಣಿ ಮಾಡಿಸಿ ವಂಚನೆ ಮಾಡಿದ್ದಾರೆ ಎಂದು ತಾಲ್ಲೂಕಿನ ವಳ್ಳೂರು ಗ್ರಾಮದ ಸಂತೋಷರೆಡ್ಡಿ ಎಂಬುವರು ಶುಕ್ರವಾರ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಹಿನ್ನೆಲೆ ಪೊಲೀಸರು F.I.R ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾ ಲಯ ಹಾಜರು ಪಡಿಸಿದಾಗ ಎರಡು ದಿನ ಕಷ್ಟಡಿಗೆ ನ್ಯಾಯಾಧೀಶ ರು ನೀಡಿದ್ದಾರೆ.