Thursday, 15th May 2025

ಚಿನ್ನದ ದರದಲ್ಲಿ 990 ರೂ. ಏರಿಕೆ

ಬೆಂಗಳೂರು: ಬಂಗಾರದ ದರದಲ್ಲಿ ಶನಿವಾರ 990 ರೂ. ಏರಿಕೆಯಾಗಿದೆ.

ಪ್ರತಿ 10 ಗ್ರಾಮ್‌ಗೆ 51,330 ರೂ.ಗೆ (24 ಕ್ಯಾರಟ್) ವೃದ್ಧಿಸಿದೆ. 22 ಕ್ಯಾರಟ್‌ ಅಥವಾ ಆಭರಣ ಚಿನ್ನದ ದರದಲ್ಲಿ 900 ರೂ. ಏರಿದ್ದು, 47,050 ರೂ.ಗೆ (Gold price ) ಹೆಚ್ಚಳವಾಗಿದೆ. ಬೆಳ್ಳಿಯ ದರದಲ್ಲಿ 3,900 ರೂ. ಇಳಿಕೆಯಾಗಿದ್ದು, ಪ್ರತಿ ಕೆಜಿಗೆ 60,500 ರೂ.ಗೆ ಇಳಿಕೆಯಾಗಿದೆ. ಪ್ಲಾಟಿನಮ್‌ ದರದಲ್ಲಿ 10 ಗ್ರಾಮ್‌ಗೆ 250 ರೂ. ಇಳಿಕೆಯಾಗಿದ್ದು, 24,499 ರೂ.ಗೆ ತಗ್ಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ದರ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾ ಯಿಯ ವಿನಿಮಯ ದರವನ್ನು ಆಧರಿಸಿ ಸ್ಥಳೀಯ ದರಗಳಲ್ಲಿ ವ್ಯತ್ಯಾಸವಾಗುತ್ತದೆ.