Sunday, 11th May 2025

ಪೆಟ್ರೋಲ್, ಡೀಸೆಲ್ ದರದಲ್ಲಿ 2 ರೂ. ಇಳಿಕೆ ಸಾಧ್ಯತೆ…?

Petrol price
ನವದೆಹಲಿ: ದೇಶೀಯ ತೈಲ ಮಾರುಕಟ್ಟೆ ಕಂಪನಿಗಳು ಪೆಟ್ರೋಲ್, ಡೀಸೆಲ್ ದರದಲ್ಲಿ 2 ರೂ. ಇಳಿಕೆ ಮಾಡುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಕಳೆದ ಕೆಲವು ದಿನ ಗಳಿಂದ ಇಳಿಕೆಯಾಗುತ್ತಿರುವುದು ಬೆಲೆ ಇಳಿಕೆ ಮಾಡುವ ಕುರಿತು ಚಿಂತನೆಗೆ ಕಾರಣ ಎನ್ನಲಾಗಿದೆ. ಮುಂದಿನ ಕೆಲವು ದಿನಗಳಲ್ಲಿ ತೈಲ ದರದಲ್ಲಿ ಪ್ರತಿ ದಿನ 40 ಪೈಸೆಯಂತೆ ಇಳಿಕೆಯಾಗಲಿದೆ ಎಂದು ಮಂಗಳವಾರ ತಿಳಿಸಿತ್ತು. ಇದರ ಪರಿಣಾಮ ಒಟ್ಟಾರೆಯಾಗಿ ಕೆಲವು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ 2 ರೂ. ವರೆಗೆ ಇಳಿಕೆಯಾಗಬಹುದು ಎಂದು ವರದಿ ಅಂದಾಜಿಸಿದೆ.

ಹಿಮಾಚಲ ಪ್ರದೇಶ, ಗುಜರಾತ್​ ವಿಧಾನಸಭೆ ಚುನಾವಣೆಗಳು ರಾಜಕೀಯವಾಗಿಯೂ ತೈಲ ಕಂಪನಿಗಳ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ಚುನಾವಣೆ ದಿನಾಂಕ ಸಮೀ ಪಿಸುತ್ತಿರುವಂತೆಯೇ ದರ ಕಡಿತದ ಮಹತ್ವದ ನಿರ್ಧಾರ ಪ್ರಕಟಗೊಳ್ಳುವ ಸಾಧ್ಯತೆ ಯೂ ಇದೆ ಎಂದು ಮೂಲಗಳ ವರದಿ ತಿಳಿಸಿದೆ.

5 ತಿಂಗಳಿಗೂ ಹೆಚ್ಚು ಕಾಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸ್ಥಿರವಾಗಿರುವುದು ಇದೇ ಮೊದಲಾಗಿದೆ.