Wednesday, 14th May 2025

ಅಕ್ರಮ ಗಣಿಗಾರಿಕೆ ಪ್ರಕರಣ: ಹೇಮಂತ್ ಸೋರೆನ್’ಗೆ ಸಮನ್ಸ್

ವದೆಹಲಿ: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ.3ರಂದು ವಿಚಾರಣೆಗೆ ಹಾಜರಾಗುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಗೆ ಜಾರಿ ನಿರ್ದೇಶ ನಾಲಯ ಬುಧವಾರ ಸಮನ್ಸ್ ಜಾರಿ ಮಾಡಿದ್ದು, ಇದರಿಂದ ಸೋರೆನ್ ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಪ್ರಕರಣದ ಕುರಿತು ವಿಚಾರಣೆ ನಡೆಸುವ ನಿಟ್ಟಿನಲ್ಲಿ ನ.03ರಂದು ಇ.ಡಿ ಕಚೇರಿಗೆ ಹಾಜ ರಾಗುವಂತೆ ಸಿಎಂ ಸೋರೆನ್ ಗೆ ಸಮನ್ಸ್ ನೀಡಲಾಗಿದೆ ಎಂದು ತಿಳಿಸಿದೆ.

ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿರುವ ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಗೆ ಗುರುವಾರ ಹಾಜರಾಗುವಂತೆ ಸೂಚಿಸಿದೆ. ಹಣಕಾಸು ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್ ಎ)ಯಡಿ ಪ್ರಶ್ನಿಸಲಿದ್ದು, ಈ ಸಂದರ್ಭದಲ್ಲಿ ಸೋರೆನ್ ಹೇಳಿಕೆ ಯನ್ನು ದಾಖಲು ಮಾಡಿಕೊಳ್ಳಲಾಗುವುದು ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಈವರೆಗೆ ಒಂದು ಸಾವಿರ ಕೋಟಿಗೂ ಅಧಿಕ ವಹಿ ವಾಟು ನಡೆದಿರುವುದಾಗಿ ಜಾರಿ ನಿರ್ದೇಶನಾ ಲಯ ಆರೋಪಿಸಿದ್ದು, ಈಗಾಗಲೇ ಪ್ರಕರಣದಲ್ಲಿ ಸೋರೆನ್ ನಿಕಟವರ್ತಿ, ಶಾಸಕ ಪಂಕಜ್ ಮಿಶ್ರಾ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.