Wednesday, 14th May 2025

ಟ್ವಿಟರ್ ಸಿಇಓ ಆಗಿ ಚೆನ್ನೈ ಮೂಲದ ಶ್ರೀರಾಮ ಕೃಷ್ಣನ್ ನೇಮಕ ?

ನವದೆಹಲಿ: ಟ್ವಿಟರ್ ತಮ್ಮ ವಶವಾಗುತ್ತಿದ್ದಂತೆ ಭಾರತೀಯ ಮೂಲದ ಸಿಇಓ ಪರಾಗ್ ಅಗರ್ವಾಲ್ ಅವರನ್ನು ಟೆಸ್ಲಾ ಮುಖ್ಯಸ್ಥ ಎಲಾನ್ ಮಸ್ಕ್ ಪದಚ್ಯುತಿಗೊಳಿಸಿದ್ದರು.

ಟ್ವಿಟರ್ ಖಾತೆ ಬಳಕೆದಾರರು ಬ್ಲೂ ಟಿಕ್ ಮಾನ್ಯತೆ ಪಡೆಯಲು ಶುಲ್ಕ ವಿಧಿಸುವ ಚಿಂತನೆ ನಡೆಯುತ್ತಿದೆ ಎನ್ನಲಾಗಿದ್ದು, ಮೂಲ ಗಳ ಪ್ರಕಾರ, ಬ್ಲೂ ಟಿಕ್ ನೀಡಲು ಮಾಸಿಕ 19.99 ಡಾಲರ್ (ಅಂದಾಜು 1600 ರೂಪಾಯಿ) ಶುಲ್ಕ ವಿಧಿಸಬಹುದು ಎನ್ನಲಾಗಿದೆ.

ಇದರ ಮಧ್ಯೆ ಟ್ವಿಟರ್ ಸಿಇಒ ಆಗಿದ್ದ ಪರಾಗ್ ಅಗರ್ವಾಲ್ ಸ್ಥಾನಕ್ಕೆ ಮತ್ತೊಬ್ಬ ಭಾರತೀಯ ನೇಮಕವಾಗಬಹುದು ಎಂದು ಹೇಳಲಾಗುತ್ತಿದೆ. ಚೆನ್ನೈ ಮೂಲದ ಶ್ರೀರಾಮ ಕೃಷ್ಣನ್ ಅವರಿಗೆ ಈ ಪಟ್ಟ ಒಲಿದು ಬರಲಿದೆ ಎನ್ನಲಾಗಿದೆ.